Hyundai i20 N Line Review in Kannada | 118bhp | Rs 9.84L | i20 Performance Model

2021-09-09 30,599

Hyundai i20 N Line Review in Kannada | ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಎನ್ ಲೈನ್ ಬಿಡುಗಡೆ ಮಾಡಿದೆ. ಹೊಸ ಪರ್ಫಾಮೆನ್ಸ್ ಆವೃತ್ತಿಯಲ್ಲಿ ಸ್ಪೋರ್ಟಿ ಎಕ್ಸಾಸ್ಟ್, ಅತ್ಯುತ್ತಮ ಸಸ್ಷೆಂಷನ್ ಮತ್ತು ಉತ್ತಮ ಹಿಡಿತ ಹೊಂದಿರುವ ಬ್ರೇಕಿಂಗ್ ಸೌಲಭ್ಯದ ಜೊತೆ ಆಕರ್ಷಕ ವಿನ್ಯಾಸ ನೀಡಲಾಗದೆ. ಹಾಗಾದರೆ ಸ್ಟ್ಯಾಂಡರ್ಡ್ ಐ20 ಮಾದರಿಗೂ ಐ20 ಎನ್ ಲೈನ್ ಮಾದರಿಗೂ ಇರುವ ವ್ಯತ್ಯಾಸವೇನು? ಬೆಲೆಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರುವ ಎನ್ ಲೈನ್ ಮಾದರಿಯ ಖರೀದಿಗೆ ಪೂರಕವಾದ ಅಂಶಗಳು ಯಾವುವು ಎಂಬುವುದನ್ನು ಈ ವಿಡಿಯೋದಲ್ಲಿ ತಿಳಿಯಿರಿ.

ಹೊಸ ಹ್ಯುಂಡೈ ಐ20 ಎನ್ ಲೈನ್ ಮಾದರಿಯನ್ನು ಪ್ರಮುಖ ಮೂರು ರೂಪಾಂತರಗಳಲ್ಲಿ ಪರಿಚಯಿಸಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.90 ಲಕ್ಷ ಬೆಲೆ ಹೊಂದಿದೆ.

Free Traffic Exchange